ಆಸ್ಪತ್ರೆಗ್ ಚಿಕಿತ್ಸೆಗ್ ಬೈದಿನ ಪೊಂಜೊವುಗ್ ಸಹಾಯ ಮಲ್ಪುನ ನಾಟಕ ಮಲ್ತ್ ದ್ ಪೊಂಜೊವುನ್ ಅತ್ಯಾಚಾರ ಮಲ್ದಿನ ಘಟನೆ ಕುಡ್ಲಡ್ ನಡದ್ಂಡ್.
ಮಂಗಳೂರು: ಅನಾರೋಗ್ಯ ಹಿನ್ನಲೆ ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ಮಹಿಳೆಗೆ ಸಹಾಯ ಮಾಡುವ ನಾಟಕವಾಡಿ ಆಕೆಯನ್ನು ಅತ್ಯಾಚಾರವೆಸಗಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕೇರಳ ಮೂಲದ ಮಹಿಳೆ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಬಂದಿದ್ದು, ಅಲ್ಲಿ ಪರಿಚಿತ ಹಾಗೂ ಸಹಾಯ ಮಾಡಲು ನಿಂತಿದ್ದ ಯುವಕನೊಬ್ಬ ಅತ್ಯಾಚಾರ ಮಾಡಿದ್ದಾಗಿ ಮಹಿಳೆ ದೂರು ನೀಡಿದ್ದಾರೆ. ಅತ್ಯಾಚಾರ ಮಾಡಿದ್ದು ಅಲ್ಲದೆ ಅದನ್ನ ತನ್ನ ಮೊಬೈಲ್ ನಲ್ಲಿ ಚಿತ್ರಿಸಿಕೊಂಡಿದ್ದು ಬಳಿಕ ಆರೋಪಿ ಆ ವಿಡಿಯೋವನ್ನು ತೋರಿಸಿ ಬ್ಲ್ಯಾಕ್ಮೇಲ್ ಮಾಡಿ ನಿರಂತರ ಅತ್ಯಾಚಾರ ನಡೆಸಿರುವುದಾಗಿ ದೂರು ದಾಖಲಾಗಿದೆ.
ಕಾಸರಗೋಡು ಮೂಲದ ನೊಂದ ಮಹಿಳೆ ಪರಿಚಿತ ಸುಜಿತ್ ಈ ಕೃತ್ಯ ಎಸಗಿರುವುದಾಗಿ ಆರೋಪಿಸಿದ್ದಾರೆ. ಮಾರ್ಚ್ ತಿಂಗಳಿನಲ್ಲಿ ಮೊದಲ ಬಾರಿಗೆ ತನ್ನ ಮೇಲೆ ಅತ್ಯಾಚಾರ ನಡೆಸಿದ ಸುಜಿತ್, ವಿಡಿಯೋ ಬಹಿರಂಗ ಪಡಿಸುವ ಬೆದರಿಕೆ ಹಾಕಿ ನಿರಂತರ ಕಿರುಕುಳ ನೀಡಿದ್ದಾಗಿ ಮಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಇತ್ತೀಚೆಗೆ ನೊಂದ ಮಹಿಳೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ಅಲ್ಲಿಯೂ ತನ್ನ ಮೇಲೆ ಸುಜೀತ್ ಅತ್ಯಾಚಾರ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆಯ ಬಳಿಕ ನೊಂದ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿ ರಕ್ಷಣೆ ಕೋರಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಕಾಸರಗೋಡಿನ ಹೊಸದುರ್ಗದಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.